કન્નડ ભાષામાં અનુવાદ - હમઝહ બતુર
તેનું અનુવાદ મોહમ્મદ હમઝહ બતૂર દ્વારા કરવામાં આવ્યું. ફરી રવ્વાદ ભાષાંતર કેન્દ્રની દેખરેખ હેઠળ તેની ચકાસણી કરવામાં આવી.
الٓمٓ
ಅಲಿಫ್-ಲಾಮ್-ಮೀಮ್.
غُلِبَتِ ٱلرُّومُ
ರೋಮನ್ನರು ಪರಾಜಿತರಾದರು.
فِيٓ أَدۡنَى ٱلۡأَرۡضِ وَهُم مِّنۢ بَعۡدِ غَلَبِهِمۡ سَيَغۡلِبُونَ
ಸಮೀಪದ ಪ್ರದೇಶದಲ್ಲಿ. ತಮ್ಮ ಪರಾಜಯದ ಬಳಿಕ ಅವರು ಸದ್ಯವೇ ವಿಜಯಿಗಳಾಗುವರು.[1]
فِي بِضۡعِ سِنِينَۗ لِلَّهِ ٱلۡأَمۡرُ مِن قَبۡلُ وَمِنۢ بَعۡدُۚ وَيَوۡمَئِذٖ يَفۡرَحُ ٱلۡمُؤۡمِنُونَ
ಕೆಲವೇ ವರ್ಷಗಳಲ್ಲಿ.[1] ಅದರ ಮುಂದಿನ ಮತ್ತು ಹಿಂದಿನ ಸಂಗತಿಗಳ ನಿಯಂತ್ರಣವು ಅಲ್ಲಾಹನ ಕೈಯಲ್ಲಿದೆ. ಅಂದು ಸತ್ಯವಿಶ್ವಾಸಿಗಳು ಸಂಭ್ರಮಿಸುವರು.
بِنَصۡرِ ٱللَّهِۚ يَنصُرُ مَن يَشَآءُۖ وَهُوَ ٱلۡعَزِيزُ ٱلرَّحِيمُ
ಅಲ್ಲಾಹನ ಸಹಾಯದಿಂದ. ಅಲ್ಲಾಹು ಅವನು ಬಯಸುವವರಿಗೆ ಸಹಾಯ ಮಾಡುತ್ತಾನೆ. ಅವನು ಪ್ರಬಲನು ಮತ್ತು ದಯೆ ತೋರುವವನಾಗಿದ್ದಾನೆ.
وَعۡدَ ٱللَّهِۖ لَا يُخۡلِفُ ٱللَّهُ وَعۡدَهُۥ وَلَٰكِنَّ أَكۡثَرَ ٱلنَّاسِ لَا يَعۡلَمُونَ
ಇದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹು ಅವನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
يَعۡلَمُونَ ظَٰهِرٗا مِّنَ ٱلۡحَيَوٰةِ ٱلدُّنۡيَا وَهُمۡ عَنِ ٱلۡأٓخِرَةِ هُمۡ غَٰفِلُونَ
ಅವರು ಇಹಲೋಕ ಜೀವನದ ಬಹಿರಂಗ ವಿಷಯಗಳನ್ನು ಮಾತ್ರ ತಿಳಿದಿದ್ದಾರೆ. ಆದರೆ ಪರಲೋಕದ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ.
أَوَلَمۡ يَتَفَكَّرُواْ فِيٓ أَنفُسِهِمۗ مَّا خَلَقَ ٱللَّهُ ٱلسَّمَٰوَٰتِ وَٱلۡأَرۡضَ وَمَا بَيۡنَهُمَآ إِلَّا بِٱلۡحَقِّ وَأَجَلٖ مُّسَمّٗىۗ وَإِنَّ كَثِيرٗا مِّنَ ٱلنَّاسِ بِلِقَآيِٕ رَبِّهِمۡ لَكَٰفِرُونَ
ಅವರು ಸ್ವಯಂ ಆಲೋಚಿಸುವುದಿಲ್ಲವೇ? ಅಲ್ಲಾಹು ಭೂಮ್ಯಾಕಾಶಗಳನ್ನು ಹಾಗೂ ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಸತ್ಯ ಸಮೇತವಾಗಿ ಮತ್ತು ಒಂದು ನಿಶ್ಚಿತ ಅವಧಿಯವರೆಗೆ ಮಾತ್ರ ಸೃಷ್ಟಿಸಿದ್ದಾನೆ. ಜನರಲ್ಲಿ ಹೆಚ್ಚಿನವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದವರಾಗಿದ್ದಾರೆ.
أَوَلَمۡ يَسِيرُواْ فِي ٱلۡأَرۡضِ فَيَنظُرُواْ كَيۡفَ كَانَ عَٰقِبَةُ ٱلَّذِينَ مِن قَبۡلِهِمۡۚ كَانُوٓاْ أَشَدَّ مِنۡهُمۡ قُوَّةٗ وَأَثَارُواْ ٱلۡأَرۡضَ وَعَمَرُوهَآ أَكۡثَرَ مِمَّا عَمَرُوهَا وَجَآءَتۡهُمۡ رُسُلُهُم بِٱلۡبَيِّنَٰتِۖ فَمَا كَانَ ٱللَّهُ لِيَظۡلِمَهُمۡ وَلَٰكِن كَانُوٓاْ أَنفُسَهُمۡ يَظۡلِمُونَ
ಅವರು ಭೂಮಿಯಲ್ಲಿ ಸಂಚರಿಸಿ, ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರು ಭೂಮಿಯನ್ನು ಉತ್ತು ಬೇಸಾಯ ಮಾಡಿದರು. ಅವರು ಇವರಿಗಿಂತಲೂ ಹೆಚ್ಚು ಭೂಮಿಯಲ್ಲಿ ವಾಸವಾಗಿದ್ದರು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.
ثُمَّ كَانَ عَٰقِبَةَ ٱلَّذِينَ أَسَٰٓـُٔواْ ٱلسُّوٓأَىٰٓ أَن كَذَّبُواْ بِـَٔايَٰتِ ٱللَّهِ وَكَانُواْ بِهَا يَسۡتَهۡزِءُونَ
ನಂತರ, ದುಷ್ಕರ್ಮವೆಸಗಿದವರ ಅಂತ್ಯವು ಅತ್ಯಂತ ದುಸ್ತರವಾಗಿತ್ತು. ಏಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು ಮತ್ತು ಅವುಗಳನ್ನು ತಮಾಷೆ ಮಾಡುತ್ತಿದ್ದರು.
ٱللَّهُ يَبۡدَؤُاْ ٱلۡخَلۡقَ ثُمَّ يُعِيدُهُۥ ثُمَّ إِلَيۡهِ تُرۡجَعُونَ
ಅಲ್ಲಾಹು ಪ್ರಥಮ ಬಾರಿಗೆ ಸೃಷ್ಟಿಸುತ್ತಾನೆ. ನಂತರ ಅದನ್ನು ಪುನರಾವರ್ತಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
وَيَوۡمَ تَقُومُ ٱلسَّاعَةُ يُبۡلِسُ ٱلۡمُجۡرِمُونَ
ಅಂತ್ಯಸಮಯವು ಸಂಭವಿಸುವ ದಿನ ಅಪರಾಧಿಗಳು ಹತಾಶರಾಗುವರು.
وَلَمۡ يَكُن لَّهُم مِّن شُرَكَآئِهِمۡ شُفَعَٰٓؤُاْ وَكَانُواْ بِشُرَكَآئِهِمۡ كَٰفِرِينَ
ಅವರು ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ದೇವರುಗಳಲ್ಲಿ) ಯಾರೂ ಕೂಡ ಅವರಿಗೆ ಶಿಫಾರಸು ಮಾಡುವುದಿಲ್ಲ. ಸ್ವತಃ ಅವರೇ ಆ ಸಹಭಾಗಿಗಳನ್ನು ನಿಷೇಧಿಸುವರು.
وَيَوۡمَ تَقُومُ ٱلسَّاعَةُ يَوۡمَئِذٖ يَتَفَرَّقُونَ
ಅಂತ್ಯಸಮಯವು ಸಂಭವಿಸುವ ದಿನ. ಅಂದು ಅವರು ಪರಸ್ಪರ ಬೇರ್ಪಡುವರು.
فَأَمَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ فَهُمۡ فِي رَوۡضَةٖ يُحۡبَرُونَ
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಉದ್ಯಾನವನದಲ್ಲಿ ಆನಂದದಿಂದ ನಲಿದಾಡುವರು.
وَأَمَّا ٱلَّذِينَ كَفَرُواْ وَكَذَّبُواْ بِـَٔايَٰتِنَا وَلِقَآيِٕ ٱلۡأٓخِرَةِ فَأُوْلَٰٓئِكَ فِي ٱلۡعَذَابِ مُحۡضَرُونَ
ಆದರೆ ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ ಅವರನ್ನು ಶಿಕ್ಷೆಗಾಗಿ ಹಾಜರುಪಡಿಸಲಾಗುವುದು.
فَسُبۡحَٰنَ ٱللَّهِ حِينَ تُمۡسُونَ وَحِينَ تُصۡبِحُونَ
ಸಂಜೆಯಾಗುವಾಗ ಮತ್ತು ಮುಂಜಾನೆಯಾಗುವಾಗ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡಿರಿ.
وَلَهُ ٱلۡحَمۡدُ فِي ٱلسَّمَٰوَٰتِ وَٱلۡأَرۡضِ وَعَشِيّٗا وَحِينَ تُظۡهِرُونَ
ಭೂಮ್ಯಾಕಾಶಗಳಲ್ಲಿ ಸರ್ವಸ್ತುತಿಗಳು ಅವನಿಗೆ ಮಾತ್ರ ಮೀಸಲು. ರಾತ್ರಿ ಹಾಗೂ ಮಧ್ಯಾಹ್ನದಲ್ಲೂ ಅವನ್ನು ಕೊಂಡಾಡಿರಿ.
يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَيُحۡيِ ٱلۡأَرۡضَ بَعۡدَ مَوۡتِهَاۚ وَكَذَٰلِكَ تُخۡرَجُونَ
ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಜೀವವನ್ನು ನೀಡುತ್ತಾನೆ. ಇದೇ ರೀತಿ ನಿಮ್ಮನ್ನು ಕೂಡ ಹೊರತರಲಾಗುವುದು.
وَمِنۡ ءَايَٰتِهِۦٓ أَنۡ خَلَقَكُم مِّن تُرَابٖ ثُمَّ إِذَآ أَنتُم بَشَرٞ تَنتَشِرُونَ
ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನೀವು (ಜಗತ್ತಿನಾದ್ಯಂತ) ಹಬ್ಬಿಕೊಂಡ ಮಾನುಕುಲವಾಗಿ ಮಾರ್ಪಟ್ಟಿರಿ.
وَمِنۡ ءَايَٰتِهِۦٓ أَنۡ خَلَقَ لَكُم مِّنۡ أَنفُسِكُمۡ أَزۡوَٰجٗا لِّتَسۡكُنُوٓاْ إِلَيۡهَا وَجَعَلَ بَيۡنَكُم مَّوَدَّةٗ وَرَحۡمَةًۚ إِنَّ فِي ذَٰلِكَ لَأٓيَٰتٖ لِّقَوۡمٖ يَتَفَكَّرُونَ
ನಿಮಗೆ ನಿಮ್ಮಿಂದಲೇ ಪತ್ನಿಯರನ್ನು ಸೃಷ್ಟಿಸಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಅವಳಲ್ಲಿ ನೆಮ್ಮದಿಯನ್ನು ಪಡೆಯುವುದಕ್ಕಾಗಿ. ಅವನು ನಿಮ್ಮ ನಡುವೆ ಪ್ರೀತಿ ಮತ್ತು ಅನುಕಂಪವನ್ನು ಇಟ್ಟನು. ನಿಶ್ಚಯವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
وَمِنۡ ءَايَٰتِهِۦ خَلۡقُ ٱلسَّمَٰوَٰتِ وَٱلۡأَرۡضِ وَٱخۡتِلَٰفُ أَلۡسِنَتِكُمۡ وَأَلۡوَٰنِكُمۡۚ إِنَّ فِي ذَٰلِكَ لَأٓيَٰتٖ لِّلۡعَٰلِمِينَ
ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದು ಮತ್ತು ನಿಮ್ಮ ಭಾಷೆಗಳಲ್ಲಿ ಹಾಗೂ ವರ್ಣಗಳಲ್ಲಿ ವೈವಿಧ್ಯತೆಯನ್ನು ಮಾಡಿದ್ದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಜ್ಞಾನವಂತರಿಗೆ ಅದರಲ್ಲಿ ದೃಷ್ಟಾಂತಗಳಿವೆ.
وَمِنۡ ءَايَٰتِهِۦ مَنَامُكُم بِٱلَّيۡلِ وَٱلنَّهَارِ وَٱبۡتِغَآؤُكُم مِّن فَضۡلِهِۦٓۚ إِنَّ فِي ذَٰلِكَ لَأٓيَٰتٖ لِّقَوۡمٖ يَسۡمَعُونَ
ನೀವು ರಾತ್ರಿಯಲ್ಲಿ ಮತ್ತು ಹಗಲಲ್ಲಿ ನಿದ್ದೆ ಮಾಡುವುದು ಹಾಗೂ ಅಲ್ಲಾಹನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
وَمِنۡ ءَايَٰتِهِۦ يُرِيكُمُ ٱلۡبَرۡقَ خَوۡفٗا وَطَمَعٗا وَيُنَزِّلُ مِنَ ٱلسَّمَآءِ مَآءٗ فَيُحۡيِۦ بِهِ ٱلۡأَرۡضَ بَعۡدَ مَوۡتِهَآۚ إِنَّ فِي ذَٰلِكَ لَأٓيَٰتٖ لِّقَوۡمٖ يَعۡقِلُونَ
ನಿಮ್ಮಲ್ಲಿ ಭಯ ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಾ ಮಿಂಚನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆಯನ್ನು ಸುರಿಸಿ ತನ್ಮೂಲಕ ನಿರ್ಜೀವ ಭೂಮಿಗೆ ಜೀವವನ್ನು ನೀಡುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
وَمِنۡ ءَايَٰتِهِۦٓ أَن تَقُومَ ٱلسَّمَآءُ وَٱلۡأَرۡضُ بِأَمۡرِهِۦۚ ثُمَّ إِذَا دَعَاكُمۡ دَعۡوَةٗ مِّنَ ٱلۡأَرۡضِ إِذَآ أَنتُمۡ تَخۡرُجُونَ
ಭೂಮ್ಯಾಕಾಶವು ಅವನ ಆಜ್ಞೆಯಂತೆ ಅಸ್ತಿತ್ವದಲ್ಲಿರುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ಅವನು ಭೂಮಿಯಿಂದ ನಿಮ್ಮನ್ನು ಒಮ್ಮೆ ಕರೆದು ಬಿಟ್ಟರೆ, ಅಗೋ! ನೀವು ಹೊರಟು ಬರುತ್ತೀರಿ.
وَلَهُۥ مَن فِي ٱلسَّمَٰوَٰتِ وَٱلۡأَرۡضِۖ كُلّٞ لَّهُۥ قَٰنِتُونَ
ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ಎಲ್ಲರೂ ಅವನ ಆಜ್ಞೆಗೆ ವಿಧೇಯರಾಗಿದ್ದಾರೆ.
وَهُوَ ٱلَّذِي يَبۡدَؤُاْ ٱلۡخَلۡقَ ثُمَّ يُعِيدُهُۥ وَهُوَ أَهۡوَنُ عَلَيۡهِۚ وَلَهُ ٱلۡمَثَلُ ٱلۡأَعۡلَىٰ فِي ٱلسَّمَٰوَٰتِ وَٱلۡأَرۡضِۚ وَهُوَ ٱلۡعَزِيزُ ٱلۡحَكِيمُ
ಅವನೇ ಪ್ರಥಮ ಬಾರಿಗೆ ಸೃಷ್ಟಿಸುವವನು ಮತ್ತು ನಂತರ ಅದನ್ನು ಪುನರಾವರ್ತಿಸುವವನು. ಅದು ಅವನಿಗೆ ಅತ್ಯಂತ ಸುಲಭವಾಗಿದೆ. ಅವನಿಗೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತ ಗುಣಲಕ್ಷಣಗಳಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
ضَرَبَ لَكُم مَّثَلٗا مِّنۡ أَنفُسِكُمۡۖ هَل لَّكُم مِّن مَّا مَلَكَتۡ أَيۡمَٰنُكُم مِّن شُرَكَآءَ فِي مَا رَزَقۡنَٰكُمۡ فَأَنتُمۡ فِيهِ سَوَآءٞ تَخَافُونَهُمۡ كَخِيفَتِكُمۡ أَنفُسَكُمۡۚ كَذَٰلِكَ نُفَصِّلُ ٱلۡأٓيَٰتِ لِقَوۡمٖ يَعۡقِلُونَ
ಅಲ್ಲಾಹು ನಿಮಗೆ ನಿಮ್ಮಿಂದಲೇ ಒಂದು ಉದಾಹರಣೆಯನ್ನು ನೀಡುತ್ತಾನೆ. ನಾವು ನಿಮಗೆ ನೀಡಿದ ಸವಲತ್ತುಗಳಲ್ಲಿ ನಿಮ್ಮ ಗುಲಾಮರು ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಅಂದರೆ, ನಿಮಗೆ ಮತ್ತು ಅವರಿಗೆ ಸಮಾನ ಸ್ಥಾನಮಾನವಿರುವ ರೀತಿಯಲ್ಲಿ? ನೀವು ಸ್ವತಃ ನಿಮ್ಮ ಬಗ್ಗೆ ಭಯಪಡುವಂತೆ ಅವರ ಬಗ್ಗೆಯೂ ಭಯಪಡುವ ರೀತಿಯಲ್ಲಿ? ಅರ್ಥಮಾಡಿಕೊಳ್ಳುವ ಜನರಿಗೆ ನಾವು ಈ ರೀತಿ ವಚನಗಳನ್ನು ವಿವರಿಸಿಕೊಡುತ್ತೇವೆ.
بَلِ ٱتَّبَعَ ٱلَّذِينَ ظَلَمُوٓاْ أَهۡوَآءَهُم بِغَيۡرِ عِلۡمٖۖ فَمَن يَهۡدِي مَنۡ أَضَلَّ ٱللَّهُۖ وَمَا لَهُم مِّن نَّٰصِرِينَ
ಆದರೆ ಅಕ್ರಮವೆಸಗಿದವರು ಯಾವುದೇ ಜ್ಞಾನವಿಲ್ಲದೆ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅಲ್ಲಾಹು ದಾರಿತಪ್ಪಿಸಿದವರಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರಿಗೆ ಯಾವುದೇ ಸಹಾಯಕರೂ ಇರುವುದಿಲ್ಲ.
فَأَقِمۡ وَجۡهَكَ لِلدِّينِ حَنِيفٗاۚ فِطۡرَتَ ٱللَّهِ ٱلَّتِي فَطَرَ ٱلنَّاسَ عَلَيۡهَاۚ لَا تَبۡدِيلَ لِخَلۡقِ ٱللَّهِۚ ذَٰلِكَ ٱلدِّينُ ٱلۡقَيِّمُ وَلَٰكِنَّ أَكۡثَرَ ٱلنَّاسِ لَا يَعۡلَمُونَ
ಆದ್ದರಿಂದ ನೀವು ಏಕನಿಷ್ಠರಾಗಿ ನಿಮ್ಮ ಮುಖವನ್ನು ಧರ್ಮದ ಕಡೆಗೆ ತಿರುಗಿಸಿರಿ. ಅದು ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿದ ಸಹಜ ಮನೋಧರ್ಮವಾಗಿದೆ. ಅಲ್ಲಾಹನ ಸೃಷ್ಟಿ ನಿಯಮಕ್ಕೆ ಯಾವುದೇ ಬದಲಾವಣೆಯಿಲ್ಲ. ಅದೇ ನೇರವಾದ ಧರ್ಮ. ಆದರೆ ಮನುಷ್ಯರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
۞ مُنِيبِينَ إِلَيۡهِ وَٱتَّقُوهُ وَأَقِيمُواْ ٱلصَّلَوٰةَ وَلَا تَكُونُواْ مِنَ ٱلۡمُشۡرِكِينَ
ಅಲ್ಲಾಹನ ಕಡೆಗೆ ತಿರುಗಿ ಅವನನ್ನು ಭಯಪಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಬಹುದೇವಾರಾಧಕರಲ್ಲಿ ಸೇರಬೇಡಿ.
مِنَ ٱلَّذِينَ فَرَّقُواْ دِينَهُمۡ وَكَانُواْ شِيَعٗاۖ كُلُّ حِزۡبِۭ بِمَا لَدَيۡهِمۡ فَرِحُونَ
ಅಂದರೆ, ತಮ್ಮ ಧರ್ಮವನ್ನು ಒಡೆದು ಹಲವಾರು ಪಂಗಡಗಳಾಗಿ ಬಿಟ್ಟವರು. ಪ್ರತಿಯೊಂದು ಪಂಗಡವೂ ಅದರ ಕೈಯಲ್ಲಿ ಏನಿದೆಯೋ ಅದರಲ್ಲಿ ಸಂಭ್ರಮಿಸುತ್ತಿದೆ.
وَإِذَا مَسَّ ٱلنَّاسَ ضُرّٞ دَعَوۡاْ رَبَّهُم مُّنِيبِينَ إِلَيۡهِ ثُمَّ إِذَآ أَذَاقَهُم مِّنۡهُ رَحۡمَةً إِذَا فَرِيقٞ مِّنۡهُم بِرَبِّهِمۡ يُشۡرِكُونَ
ಜನರಿಗೆ ಏನಾದರೂ ತೊಂದರೆಯುಂಟಾದರೆ, ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ಸಂಪೂರ್ಣವಾಗಿ ತಿರುಗಿ ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ನಂತರ ಅಲ್ಲಾಹು ಅವರಿಗೆ ತನ್ನ ದಯೆಯ ರುಚಿಯನ್ನು ತೋರಿಸಿದರೆ, ಅವರಲ್ಲೊಂದು ಗುಂಪು ತಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.
لِيَكۡفُرُواْ بِمَآ ءَاتَيۡنَٰهُمۡۚ فَتَمَتَّعُواْ فَسَوۡفَ تَعۡلَمُونَ
ನಾವು ಅವರಿಗೆ ದಯಪಾಲಿಸಿದ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದು! ಸರಿ, ನೀವು ಆನಂದಿಸಿ. ಸದ್ಯವೇ ನಿಮಗೆ ತಿಳಿಯಲಿದೆ.
أَمۡ أَنزَلۡنَا عَلَيۡهِمۡ سُلۡطَٰنٗا فَهُوَ يَتَكَلَّمُ بِمَا كَانُواْ بِهِۦ يُشۡرِكُونَ
ನಾವು ಅವರಿಗೆ ಏನಾದರೂ ಸಾಕ್ಷ್ಯಾಧಾರವನ್ನು ಅವತೀರ್ಣಗೊಳಿಸಿದ್ದು, ಅದು ಅವರು ಮಾಡುತ್ತಿರುವ ಸಹಭಾಗಿತ್ವದ (ಶಿರ್ಕ್) ಬಗ್ಗೆ ಮಾತನಾಡುತ್ತದೆಯೇ?
وَإِذَآ أَذَقۡنَا ٱلنَّاسَ رَحۡمَةٗ فَرِحُواْ بِهَاۖ وَإِن تُصِبۡهُمۡ سَيِّئَةُۢ بِمَا قَدَّمَتۡ أَيۡدِيهِمۡ إِذَا هُمۡ يَقۡنَطُونَ
ನಾವು ಮನುಷ್ಯರಿಗೆ ದಯೆಯ ರುಚಿಯನ್ನು ತೋರಿಸಿದರೆ ಅವರು ಸಂತೋಷಪಡುತ್ತಾರೆ. ಆದರೆ, ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ ಅಗೋ! ಅವರು ಹತಾಶರಾಗಿ ಬಿಡುತ್ತಾರೆ.
أَوَلَمۡ يَرَوۡاْ أَنَّ ٱللَّهَ يَبۡسُطُ ٱلرِّزۡقَ لِمَن يَشَآءُ وَيَقۡدِرُۚ إِنَّ فِي ذَٰلِكَ لَأٓيَٰتٖ لِّقَوۡمٖ يُؤۡمِنُونَ
ಅಲ್ಲಾಹು ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆಂದು ಅವರು ನೋಡಿಲ್ಲವೇ?ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
فَـَٔاتِ ذَا ٱلۡقُرۡبَىٰ حَقَّهُۥ وَٱلۡمِسۡكِينَ وَٱبۡنَ ٱلسَّبِيلِۚ ذَٰلِكَ خَيۡرٞ لِّلَّذِينَ يُرِيدُونَ وَجۡهَ ٱللَّهِۖ وَأُوْلَٰٓئِكَ هُمُ ٱلۡمُفۡلِحُونَ
ಆದ್ದರಿಂದ ನೀವು ಕುಟುಂಬ ಸಂಬಂಧಿಕರಿಗೆ ಅವರ ಹಕ್ಕನ್ನು ನೀಡಿರಿ. ಬಡವರಿಗೂ, ಪ್ರಯಾಣಿಕರಿಗೂ (ಅವರ ಹಕ್ಕನ್ನು ನೀಡಿರಿ). ಅಲ್ಲಾಹನ ಮುಖವನ್ನು ಬಯಸುವವರಿಗೆ ಅದು ಉತ್ತಮವಾಗಿದೆ. ಅವರೇ ಯಶಸ್ವಿಯಾದವರು.
وَمَآ ءَاتَيۡتُم مِّن رِّبٗا لِّيَرۡبُوَاْ فِيٓ أَمۡوَٰلِ ٱلنَّاسِ فَلَا يَرۡبُواْ عِندَ ٱللَّهِۖ وَمَآ ءَاتَيۡتُم مِّن زَكَوٰةٖ تُرِيدُونَ وَجۡهَ ٱللَّهِ فَأُوْلَٰٓئِكَ هُمُ ٱلۡمُضۡعِفُونَ
ಜನರ ಧನದಲ್ಲಿ ಹೆಚ್ಚಾಗುತ್ತಾ ಇರಲು ನೀವು ಏನನ್ನು ಬಡ್ಡಿಗೆ ನೀಡುತ್ತೀರೋ ಅದು ಅಲ್ಲಾಹನ ಬಳಿ ಹೆಚ್ಚಾಗುವುದಿಲ್ಲ. ಆದರೆ ನೀವು ಅಲ್ಲಾಹನ ಮುಖವನ್ನು ಬಯಸಿ ನೀಡುವ ಝಕಾತ್—ಅವರೇ ಇಮ್ಮಡಿ ಪ್ರತಿಫಲವನ್ನು ಪಡೆಯುವವರು.
ٱللَّهُ ٱلَّذِي خَلَقَكُمۡ ثُمَّ رَزَقَكُمۡ ثُمَّ يُمِيتُكُمۡ ثُمَّ يُحۡيِيكُمۡۖ هَلۡ مِن شُرَكَآئِكُم مَّن يَفۡعَلُ مِن ذَٰلِكُم مِّن شَيۡءٖۚ سُبۡحَٰنَهُۥ وَتَعَٰلَىٰ عَمَّا يُشۡرِكُونَ
ಅಲ್ಲಾಹನೇ ನಿಮ್ಮನ್ನು ಸೃಷ್ಟಿಸಿದವನು. ನಂತರ ಅವನು ನಿಮಗೆ ಉಪಜೀವನವನ್ನು ಒದಗಿಸಿದನು. ನಂತರ ಅವನು ನಿಮ್ಮನ್ನು ಮೃತಪಡಿಸುತ್ತಾನೆ. ನಂತರ ಪುನಃ ನಿಮಗೆ ಜೀವವನ್ನು ನೀಡುತ್ತಾನೆ. ನೀವು ಅಲ್ಲಾಹನೊಂದಿಗೆ ಸಹಭಾಗಿಗಳಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಯಾರಾದರೂ ಒಬ್ಬರು ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡುವರೇ? ಅವರು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ.
ظَهَرَ ٱلۡفَسَادُ فِي ٱلۡبَرِّ وَٱلۡبَحۡرِ بِمَا كَسَبَتۡ أَيۡدِي ٱلنَّاسِ لِيُذِيقَهُم بَعۡضَ ٱلَّذِي عَمِلُواْ لَعَلَّهُمۡ يَرۡجِعُونَ
ಮನುಷ್ಯರು ಮಾಡಿದ ದುಷ್ಕರ್ಮಗಳ ಕಾರಣದಿಂದ ನೆಲದಲ್ಲೂ, ಕಡಲಲ್ಲೂ ವಿನಾಶವು ಹರಡಿಕೊಂಡಿದೆ. ಅವರು ಮಾಡಿದ ಕೆಲವು ಕರ್ಮಗಳ ರುಚಿಯನ್ನು ಅವರಿಗೆ ತೋರಿಸಲೆಂದು. ಅವರು (ಸತ್ಯಮಾರ್ಗಕ್ಕೆ) ಮರಳಿ ಬರುವುದಕ್ಕಾಗಿ.
قُلۡ سِيرُواْ فِي ٱلۡأَرۡضِ فَٱنظُرُواْ كَيۡفَ كَانَ عَٰقِبَةُ ٱلَّذِينَ مِن قَبۡلُۚ كَانَ أَكۡثَرُهُم مُّشۡرِكِينَ
ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿ ಹಿಂದಿನ ಕಾಲದ ಜನರ ಅಂತ್ಯವು ಹೇಗಿತ್ತೆಂದು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.”
فَأَقِمۡ وَجۡهَكَ لِلدِّينِ ٱلۡقَيِّمِ مِن قَبۡلِ أَن يَأۡتِيَ يَوۡمٞ لَّا مَرَدَّ لَهُۥ مِنَ ٱللَّهِۖ يَوۡمَئِذٖ يَصَّدَّعُونَ
ಯಾರಿಗೂ ತಡೆಯೊಡ್ಡಲು ಸಾಧ್ಯವಾಗದ ಒಂದು ದಿನ ಬರುವುದಕ್ಕೆ ಮೊದಲು ನೀವು ನಿಮ್ಮ ಮುಖವನ್ನು ನೇರವಾದ ಧರ್ಮದ ಕಡೆಗೆ ತಿರುಗಿಸಿರಿ. ಅಂದು ಎಲ್ಲರೂ ಬೇರೆ ಬೇರೆಯಾಗಿ ಬಿಡುವರು.
مَن كَفَرَ فَعَلَيۡهِ كُفۡرُهُۥۖ وَمَنۡ عَمِلَ صَٰلِحٗا فَلِأَنفُسِهِمۡ يَمۡهَدُونَ
ಯಾರು ಸತ್ಯವನ್ನು ನಿಷೇಧಿಸುತ್ತಾರೋ ಅವರ ಸತ್ಯನಿಷೇಧವು ಅವರಿಗೇ ಕೆಡುಕಾಗಿದೆ. ಯಾರು ಸತ್ಕರ್ಮವೆಸಗುತ್ತಾರೋ ಅವರು ಸ್ವಯಂ ಅವರಿಗೇ ವಾಸ್ತವ್ಯಗಳನ್ನು ಸಿದ್ಧಗೊಳಿಸುತ್ತಿದ್ದಾರೆ.
لِيَجۡزِيَ ٱلَّذِينَ ءَامَنُواْ وَعَمِلُواْ ٱلصَّٰلِحَٰتِ مِن فَضۡلِهِۦٓۚ إِنَّهُۥ لَا يُحِبُّ ٱلۡكَٰفِرِينَ
ಅಲ್ಲಾಹು ತನ್ನ ಔದಾರ್ಯದಿಂದ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಪ್ರತಿಫಲವನ್ನು ನೀಡಲೆಂದು. ಅವನು ಸತ್ಯನಿಷೇಧಿಗಳನ್ನು ಎಂದಿಗೂ ಇಷ್ಟಪಡುವುದಿಲ್ಲ.
وَمِنۡ ءَايَٰتِهِۦٓ أَن يُرۡسِلَ ٱلرِّيَاحَ مُبَشِّرَٰتٖ وَلِيُذِيقَكُم مِّن رَّحۡمَتِهِۦ وَلِتَجۡرِيَ ٱلۡفُلۡكُ بِأَمۡرِهِۦ وَلِتَبۡتَغُواْ مِن فَضۡلِهِۦ وَلَعَلَّكُمۡ تَشۡكُرُونَ
ನಿಮಗೆ ಮಳೆಯ ಬಗ್ಗೆ ಸಿಹಿ ಸುದ್ದಿ ನೀಡಲು, ಅವನ ದಯೆಯ ರುಚಿಯನ್ನು ನಿಮಗೆ ತೋರಿಸಲು, ನಾವೆಗಳು ಅವನ ಆಜ್ಞೆಯಂತೆ (ಸಮುದ್ರದಲ್ಲಿ) ಚಲಿಸಲು ಮತ್ತು ಅವನ ಔದಾರ್ಯದಿಂದ ನೀವು ಉಪಜೀವನವನ್ನು ಹುಡುಕಲು ಅವನು ಗಾಳಿಗಳನ್ನು ಕಳುಹಿಸುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನೀವು ಕೃತಜ್ಞರಾಗುವುದಕ್ಕಾಗಿ.
وَلَقَدۡ أَرۡسَلۡنَا مِن قَبۡلِكَ رُسُلًا إِلَىٰ قَوۡمِهِمۡ فَجَآءُوهُم بِٱلۡبَيِّنَٰتِ فَٱنتَقَمۡنَا مِنَ ٱلَّذِينَ أَجۡرَمُواْۖ وَكَانَ حَقًّا عَلَيۡنَا نَصۡرُ ٱلۡمُؤۡمِنِينَ
ನಾವು ನಿಮಗಿಂತ ಮೊದಲು ಅನೇಕ ಪ್ರವಾದಿಗಳನ್ನು ಅವರ ಜನರ ಬಳಿಗೆ ಕಳುಹಿಸಿದ್ದೇವೆ. ಅವರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆಗ ನಾವು ಅಪರಾಧವೆಸಗಿದ ಜನರಿಂದ ಪ್ರತೀಕಾರ ಪಡೆದೆವು. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ.
ٱللَّهُ ٱلَّذِي يُرۡسِلُ ٱلرِّيَٰحَ فَتُثِيرُ سَحَابٗا فَيَبۡسُطُهُۥ فِي ٱلسَّمَآءِ كَيۡفَ يَشَآءُ وَيَجۡعَلُهُۥ كِسَفٗا فَتَرَى ٱلۡوَدۡقَ يَخۡرُجُ مِنۡ خِلَٰلِهِۦۖ فَإِذَآ أَصَابَ بِهِۦ مَن يَشَآءُ مِنۡ عِبَادِهِۦٓ إِذَا هُمۡ يَسۡتَبۡشِرُونَ
ಅಲ್ಲಾಹು ಗಾಳಿಗಳನ್ನು ಕಳುಹಿಸುತ್ತಾನೆ. ಅವು ಮೋಡಗಳನ್ನು ಎತ್ತಿಕೊಳ್ಳುತ್ತವೆ. ನಂತರ ಅಲ್ಲಾಹು ಅವನು ಇಚ್ಛಿಸುವಂತೆ ಅದನ್ನು ಆಕಾಶದಲ್ಲಿ ಹರಡುತ್ತಾನೆ. ನಂತರ ಅದನ್ನು ತುಣುಕುಗಳನ್ನಾಗಿ ಮಾಡುತ್ತಾನೆ. ಆಗ ಅದರ ಎಡೆಯಿಂದ ಮಳೆಹನಿಗಳು ಹೊರಬರುವುದನ್ನು ನೀವು ಕಾಣುತ್ತೀರಿ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರ ಮೇಲೆ ಅದನ್ನು ಸುರಿಸಿದಾಗ ಅಗೋ! ಅವರು ಸಂತೋಷಪಡುತ್ತಾರೆ.
وَإِن كَانُواْ مِن قَبۡلِ أَن يُنَزَّلَ عَلَيۡهِم مِّن قَبۡلِهِۦ لَمُبۡلِسِينَ
ಆ ಮಳೆಯು ಅವರ ಮೇಲೆ ಸುರಿಯುವುದಕ್ಕೆ ಮೊದಲು ಖಂಡಿತವಾಗಿಯೂ ಅವರು ನಿರಾಶರಾಗಿದ್ದರು.
فَٱنظُرۡ إِلَىٰٓ ءَاثَٰرِ رَحۡمَتِ ٱللَّهِ كَيۡفَ يُحۡيِ ٱلۡأَرۡضَ بَعۡدَ مَوۡتِهَآۚ إِنَّ ذَٰلِكَ لَمُحۡيِ ٱلۡمَوۡتَىٰۖ وَهُوَ عَلَىٰ كُلِّ شَيۡءٖ قَدِيرٞ
ಅಲ್ಲಾಹನ ದಯೆಯ ಪರಿಣಾಮಗಳನ್ನು ನೋಡಿರಿ. ಭೂಮಿಯು ನಿರ್ಜೀವವಾದ ಬಳಿಕ ಅವನು ಅದಕ್ಕೆ ಹೇಗೆ ಜೀವ ನೀಡುತ್ತಾನೆಂದು. ಅಂತಹವನು ಸತ್ತವರಿಗೆ ಜೀವ ನೀಡುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
وَلَئِنۡ أَرۡسَلۡنَا رِيحٗا فَرَأَوۡهُ مُصۡفَرّٗا لَّظَلُّواْ مِنۢ بَعۡدِهِۦ يَكۡفُرُونَ
ನಾವು ಬಿರುಗಾಳಿಯನ್ನು ಕಳುಹಿಸಿ ಅದು ಅವರ ಹೊಲಗಳನ್ನು ಹಳದಿ ಬಣ್ಣಕ್ಕೆ ತಿರುಗಿಸುವುದನ್ನು (ಬಾಡಿಸುವುದನ್ನು) ಕಂಡರೂ ಅವರು ಅದರ ಬಳಿಕವೂ ಕೃತಘ್ನರಾಗಿಯೇ ಇರುವರು.
فَإِنَّكَ لَا تُسۡمِعُ ٱلۡمَوۡتَىٰ وَلَا تُسۡمِعُ ٱلصُّمَّ ٱلدُّعَآءَ إِذَا وَلَّوۡاْ مُدۡبِرِينَ
ಸತ್ತವರಿಗೆ ಕೇಳುವಂತೆ ಮಾಡಲು ನಿಮಗೆ ಖಂಡಿತ ಸಾಧ್ಯವಿಲ್ಲ. ಕಿವುಡರು ಬೆನ್ನು ತಿರುಗಿಸಿ ನಡೆದರೆ ಅವರಿಗೆ ಕರೆ ಕೇಳುವಂತೆ ಮಾಡಲು ಕೂಡ ನಿಮಗೆ ಸಾಧ್ಯವಿಲ್ಲ.
وَمَآ أَنتَ بِهَٰدِ ٱلۡعُمۡيِ عَن ضَلَٰلَتِهِمۡۖ إِن تُسۡمِعُ إِلَّا مَن يُؤۡمِنُ بِـَٔايَٰتِنَا فَهُم مُّسۡلِمُونَ
ಕುರುಡರನ್ನು ಅವರ ದುರ್ಮಾರ್ಗದಿಂದ ಮುಕ್ತಗೊಳಿಸಿ ಸನ್ಮಾರ್ಗಕ್ಕೆ ದಾರಿ ತೋರಿಸಲು ನಿಮಗೆ ಸಾಧ್ಯವಿಲ್ಲ. ನಮ್ಮ ವಚನಗಳಲ್ಲಿ ವಿಶ್ವಾಸವಿಟ್ಟು ನಂತರ ಶರಣಾಗುವವರು ಯಾರೋ ಅವರಿಗೆ ಮಾತ್ರ ನೀವು ಕೇಳುವಂತೆ ಮಾಡಬಲ್ಲಿರಿ.
۞ ٱللَّهُ ٱلَّذِي خَلَقَكُم مِّن ضَعۡفٖ ثُمَّ جَعَلَ مِنۢ بَعۡدِ ضَعۡفٖ قُوَّةٗ ثُمَّ جَعَلَ مِنۢ بَعۡدِ قُوَّةٖ ضَعۡفٗا وَشَيۡبَةٗۚ يَخۡلُقُ مَا يَشَآءُۚ وَهُوَ ٱلۡعَلِيمُ ٱلۡقَدِيرُ
ಅಲ್ಲಾಹು ನಿಮ್ಮನ್ನು ದುರ್ಬಲ ಸ್ಥಿತಿಯಲ್ಲಿ ಸೃಷ್ಟಿಸಿದನು. ನಂತರ ದೌರ್ಬಲ್ಯದ ಬಳಿಕ ಅವನು ನಿಮಗೆ ಶಕ್ತಿಯನ್ನು ನೀಡಿದನು. ನಂತರ ಶಕ್ತಿಯನ್ನು ನೀಡಿದ ಬಳಿಕ ಅವನು ನಿಮ್ಮನ್ನು ಪುನಃ ದುರ್ಬಲರಾಗಿ ಮತ್ತು ಕೂದಲು ನೆರೆತವರಾಗಿ ಮಾಡಿದನು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.
وَيَوۡمَ تَقُومُ ٱلسَّاعَةُ يُقۡسِمُ ٱلۡمُجۡرِمُونَ مَا لَبِثُواْ غَيۡرَ سَاعَةٖۚ كَذَٰلِكَ كَانُواْ يُؤۡفَكُونَ
ಅಂತ್ಯಸಮಯವು ಸಂಭವಿಸುವ ದಿನದಂದು ಅಪರಾಧಿಗಳು ಆಣೆ ಮಾಡುತ್ತಾ, “ನಾವು (ಇಹಲೋಕದಲ್ಲಿ) ಒಂದು ತಾಸಿಗಿಂತ ಹೆಚ್ಚು ವಾಸವಾಗಿರಲಿಲ್ಲ” ಎಂದು ಹೇಳುವರು. ಈ ರೀತಿ ಅವರನ್ನು (ಸತ್ಯದಿಂದ) ತಪ್ಪಿಸಿಬಿಡಲಾಗಿದೆ.
وَقَالَ ٱلَّذِينَ أُوتُواْ ٱلۡعِلۡمَ وَٱلۡإِيمَٰنَ لَقَدۡ لَبِثۡتُمۡ فِي كِتَٰبِ ٱللَّهِ إِلَىٰ يَوۡمِ ٱلۡبَعۡثِۖ فَهَٰذَا يَوۡمُ ٱلۡبَعۡثِ وَلَٰكِنَّكُمۡ كُنتُمۡ لَا تَعۡلَمُونَ
ಜ್ಞಾನ ಮತ್ತು ವಿಶ್ವಾಸವನ್ನು ನೀಡಲಾದವರು ಹೇಳುವರು: “ನೀವು ಅಲ್ಲಾಹನ ದಾಖಲೆಯಲ್ಲಿರುವಂತೆ ಪುನರುತ್ಥಾನ ದಿನದವರೆಗೆ ವಾಸವಾಗಿದ್ದಿರಿ. ಇಗೋ ಇದೇ ಪುನರುತ್ಥಾನದ ದಿನ! ಆದರೆ ನಿಮಗೆ ಅದು ತಿಳಿದಿಲ್ಲ.”
فَيَوۡمَئِذٖ لَّا يَنفَعُ ٱلَّذِينَ ظَلَمُواْ مَعۡذِرَتُهُمۡ وَلَا هُمۡ يُسۡتَعۡتَبُونَ
ಅಕ್ರಮಿಗಳಿಗೆ ಆ ದಿನ ಅವರ ನೆಪಗಳು ಯಾವುದೇ ಉಪಕಾರ ಮಾಡುವುದಿಲ್ಲ. ಅವರೊಡನೆ ಪಶ್ಚಾತ್ತಾಪಪಡುವಂತೆಯೂ ಕೇಳಿಕೊಳ್ಳಲಾಗುವುದಿಲ್ಲ.
وَلَقَدۡ ضَرَبۡنَا لِلنَّاسِ فِي هَٰذَا ٱلۡقُرۡءَانِ مِن كُلِّ مَثَلٖۚ وَلَئِن جِئۡتَهُم بِـَٔايَةٖ لَّيَقُولَنَّ ٱلَّذِينَ كَفَرُوٓاْ إِنۡ أَنتُمۡ إِلَّا مُبۡطِلُونَ
ನಾವು ಈ ಕುರ್‌ಆನ್‍ನಲ್ಲಿ ಜನರಿಗೋಸ್ಕರ ಎಲ್ಲ ರೀತಿಯ ಉದಾಹರಣೆಗಳನ್ನು ವಿವರಿಸಿದ್ದೇವೆ. ನೀವು ಒಂದು ದೃಷ್ಟಾಂತದೊಂದಿಗೆ ಅವರ ಬಳಿ ತೆರಳಿದರೂ ಸತ್ಯನಿಷೇಧಿಗಳು ಹೇಳುವರು: “ನೀವು ಖಂಡಿತವಾಗಿಯೂ ಮಿಥ್ಯವಾದಿಗಳಾಗಿದ್ದೀರಿ.”
كَذَٰلِكَ يَطۡبَعُ ٱللَّهُ عَلَىٰ قُلُوبِ ٱلَّذِينَ لَا يَعۡلَمُونَ
ಈ ರೀತಿ ಅಲ್ಲಾಹು (ಸತ್ಯವನ್ನು) ಅರ್ಥಮಾಡಿಕೊಳ್ಳಲು ಮುಂದಾಗದವರ ಹೃದಯಗಳಿಗೆ ಮೊಹರು ಹಾಕುವನು.
فَٱصۡبِرۡ إِنَّ وَعۡدَ ٱللَّهِ حَقّٞۖ وَلَا يَسۡتَخِفَّنَّكَ ٱلَّذِينَ لَا يُوقِنُونَ
ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ದೃಢವಿಶ್ವಾಸವಿಲ್ಲದ ಆ ಜನರು ನಿಮ್ಮನ್ನು ತಾಳ್ಮೆಗೆಡುವಂತೆ ಮಾಡದಿರಲಿ.
مشاركة عبر